ರೋಗ ನಿದಾನ
ನೈಸೀರಿಯ ಗಾನರೀಯೀ ಎಂಬ ಏಕಾಣುಜೀವಿಯೇ ಈ ರೋಗಕ್ಕೆ ಕಾರಣ ಎಂದು ಮೇಲೆ ಹೇಳಿದೆ. ಇದು ಗ್ರಾಮನ ವರ್ಣಪರೀಕ್ಷೆಗೆ ನಿಷೇಧಾರ್ಥಕ ಫಲಿತಾಂಶ ನೀಡುತ್ತದೆ. ಸೂಕ್ಷ್ಮದರ್ಶಕದಲ್ಲಿ ಪರೀಕ್ಷಿಸಿದಾಗ ಒಂದೊಂದು ಸೂಕ್ಷ್ಮಜೀವಿಯೂ ಒಂದು ಜೋಡಿ ಅವರೆಬೀಜದಾಕಾರದ ರಚನೆಯಂತೆ ಕಾಣುತ್ತದೆ. ಇದನ್ನು ಏಕಾಣುಜೀವಿ ಪ್ರಯೋಗಶಾಲೆಗಳಲ್ಲಿ ಚಾಕಲೇಟ್ ಅಗಾರ್ ಎಂಬ ಮಾಧ್ಯಮದಲ್ಲಿ ಬೆಳೆಸಬಹುದು. ಜನನೇಂದ್ರಿಯಗಳಿಂದ ಸ್ರವಿಸುವ ಕೀವಿನಲ್ಲಿ ಅನೇಕ ಕ್ರಿಮಿಗಳಿರುವುದರಿಂದ ರೋಗ ಒಬ್ಬರಿಂದ ಇನ್ನೊಬ್ಬರಿಗೆ ಸಂಭೋಗದ ಕಾಲದಲ್ಲಿ ಹರಡುತ್ತದೆ. ಅಲ್ಲದೆ ಕೀವು ತಗಲಿದ ಕಕ್ಕಸಿನ ಪೀಠ, ಕೀವನ್ನು ಮುಟ್ಟಿದ ಬೆರಳು, ಕೀವನ್ನು ಒರಸಿದ ಬಟ್ಟೆ ಮುಂತಾದವುಗಳಿಂದ ಕನ್ಯೆಯರಿಗೆ ಮತ್ತು ಮಕ್ಕಳಿಗೆ ರೋಗ ಹರಡಬಹುದು. ಕ್ರಿಮಿ ದೇಹವನ್ನು ಹೊಕ್ಕ ಅನಂತರ 3-14 ದಿವಸಗಳಲ್ಲಿ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ರೋಗಲಕ್ಷಣಗಳು==
ಜನನೇಂದ್ರಿಯಗಳ ಒಳರಚನಾಕ್ರಮದ ವ್ಯತ್ಯಾಸದ ದೆಸೆಯಿಂದ ಇದರ ಲಕ್ಷಣಗಳು ಪುರುಷರಲ್ಲಿ ಮತ್ತು ಸ್ತ್ರೀಯರಲ್ಲಿ ಬೇರೆ ಬೇರೆಯಾಗಿರುತ್ತವೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ